About Dr. H.S.M. Prakash
ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೈಪುಣ್ಯವನ್ನು ಹೊಂದಿರುವ ಅನುಭವೀ ಅನುವಾದಕರು. ದೆಹಲಿಯ ಅಧಿಕಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ಪಡೆದ ಅನುಭವದ ಹಿನ್ನೆಲೆಯ ಸಹಾಯದಿಂದ ಈ ಕಾದಂಬರಿಯ ಜಟಿಲ ಕಥಾವಸ್ತುವನ್ನು ಸುಲಭವಾಗಿ ಕನ್ನಡದಲ್ಲಿ ನಿರೂಪಿಸಿದ್ದಾರೆ. ಇವರ ಅನುವಾದಿತ ಈಶಾನ್ಯ ಭಾರತದ ಕಥಾ ಸಂಕಲನ Earth Songs ಕೃತಿಯನ್ನು 'ಭೂಮಿ ಗೀತೆಗಳು' ಎಂಬ ಹೆಸರಿನಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಕಟಿಸಿದೆ. ನಾಗಾಲ್ಯಾಂಡಿನ ಸಂಘರ್ಷದ ಚಿತ್ರಣವಾದ 'ಈ ಬೆಟ್ಟಗಳೇ ನಮ್ಮ ಮನೆಗಳು', ಕೃತಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. 'ಕೋಲಾರ್ ಗೋಲ್ಡ್ ಮೈನ್ಸ್' ಎನ್ನುವ ಕೃತಿ ಭಾರತೀಯ ಭೂವೈಜ್ಞಾನಿಕ ಸಂಸ್ಥೆಯ ವತಿಯಿಂದ ಪ್ರಕಟವಾಗಿದೆ. ಕಾವ್ಯ, ಕಾದಂಬರಿ, ಕಥಾ ಸಂಕಲನ, ವೈಜ್ಞಾನಿಕ,, ಇತಿಹಾಸ ಒಳಗೊಂಡಂತೆ ಇವರ 45 ಅನುವಾದಿತ ಕೃತಿಗಳು ಪ್ರಕಟವಾಗಿವೆ.