
Putani Bharateeyaru
Publisher:
Awwa Pustaka
Language:
Kannada
Pages:
148
Country of Origin:
IN
Age Range:
11-18
Average Reading Time
296 mins
Book Description
ಭೇಡಾಘಾಟ್ ನಲ್ಲಿ ನಿಜವಾಗಿಯೂ ವಜ್ರಗಳು ಅಡಗಿವೆಯೇ? ಪುಟ್ಟ ಸಿಬ್ಸಾಳ ಮ್ಯಾಜಿಕ್ ಹಾಸುಗಂಬಳಿ ಅವಳನ್ನು ತವಾಂಗ್‌ನಿಂದ ಹೊರಗೆ ಹಾರಿಸುತ್ತದೆಯೇ? ಅಂಡಮಾನ್‌ನಲ್ಲಿ ದೋಣಿ ವಿಹಾರದ ಸಮಯದಲ್ಲಿ ಮೊಸಳೆಗಳು ಕಣ್ಮಣಿ ಮತ್ತು ಅವಳ ಸ್ನೇಹಿತರ ಗುಂಪನ್ನು ಬೆನ್ನಟ್ಟಿದಾಗ ಏನಾಗುತ್ತದೆ? ಕರ್ನಾಟಕದ ವೀರಗಲ್ಲುಗಳ ಬಗ್ಗೆ ನಿಮಗೆ ತಿಳಿದಿದೆಯೇ? ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಾಜಾ ಕತ್ತೆ ಏನು ಮಾಡುತ್ತಿದೆ? ವಿಶ್ವದ ಅತಿ ಎತ್ತರದ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಹಿಮಾಚಲದಲ್ಲಿದೆ ಎಂದು ನಿಮಗೆ ತಿಳಿದಿದೆಯೇ? ಗೋವಾದಲ್ಲಿ ಮಾತ್ರ ಮೋಟಾರ್ ಸೈಕಲ್ ಟ್ಯಾಕ್ಸಿಗಳಿವೆಯೇ? ಅಥವಾ ಡೈನೋಸಾರ್‌ಗಳು 65 ಮಿಲಿಯನ್ ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಬದುಕಿದ್ದವೇ? ಕಥೆಗಳು ಮತ್ತು ಆಕರ್ಷಕ ಸಂಗತಿಗಳು ನಿಮ್ಮನ್ನು ಭಾರತದ 16 ರಾಜ್ಯಗಳಲ್ಲಿ ಒಂದು ಅದ್ಭುತ ಸವಾರಿಗೆ ಕರೆದೊಯ್ಯುತ್ತವೆ. ಅವು ಜಿಗ್ ಸಾ ಪಜಲ್ ನ ತುಂಡುಗಳಂತೆ ತುಂಬಾ ವಿಭಿನ್ನವಾಗಿ ಕಂಡರೂ ನಮ್ಮ ಭವ್ಯವಾದ ಅಖಂಡ ಭಾರತವನ್ನು ಒಟ್ಟಿಗೆ ಕಟ್ಟಿಕೊಡುತ್ತವೆ. ಈ ಪುಸ್ತಕದ ಐದು ಕಥೆಗಳನ್ನು ICSE ಮತ್ತು NCERT ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗಿದೆ.