Nanna Tangi Eeda

Nanna Tangi Eeda

Publisher:

Chanda Pustaka

Language:

Kannada

Pages:

214

Country of Origin:

India

Age Range:

18-100

Average Reading Time

428 mins

Buy For ₹260

* Actual purchase price could be much less, as we run various offers

Book Description

ಟಿಲ್ಡಾಳದು ಕಟ್ಟು ನಿಟ್ಟಿ ನ ದಿನಚರಿ. ಮಾಸ್ಟರ್ ಪದವಿಯ ಓದು, ಸೂಪರ್ ಮಾರ್ಕೆ ಟ್ ನಲ್ಲಿ ಕೆಲಸ ಮತ್ತು ಅವಳ ಪುಟ್ಟ ತಂಗಿ ಈಡಾಳನ್ನು ಹಾಗೂ ಒಮ್ಮೊ ಮ್ಮೆ ಅವಳ ಮದ್ಯವ್ಯಸನಿ ತಾಯಿಯನ್ನೂ ನೋ ಡಿಕೊ ಳ್ಳುವುದರ ನಡುವೆ ಅವಳಿಗಾಗಿ ಸಮಯ ಸಿಗುವುದೇ ಕಡಿಮೆ. ಅವರ ಮನೆಯಲ್ಲಿ ತಂದೆ ಎನ್ನಿಸಿಕೊ ಂಡ ವ್ಯಕ್ತಿ ಇಲ್ಲ. ಈ ಮೂವರ ವಾಸ ಜರ್ಮ ನಿಯ ಸಣ್ಣದೊ ಂದು ಊರಿನ ‘ಖುಷಿಯ ರಸ್ತೆ’ಯಲ್ಲಿ. ಟಿಲ್ಡಾಳಿಗೆ ಆ ಊರಿನ ಜೀ ವನ ರೇ ಜಿಗೆ ಹುಟ್ಟಿ ಸುತ್ತಿದೆ. ಅವಳ ಗೆಳೆಯ ಗೆಳತಿಯರು ಊರು ಬಿಟ್ಟು ಆಮ್ ಸ್ಟರ್ ಡಾಮ್ ಮತ್ತು ಬರ್ಲಿ ನ್ ನಂತಹ ದೊ ಡ್ಡ ಊರುಗಳನ್ನು ಸೇ ರಿಕೊ ಂಡುಬಿಟ್ಟಿ ದ್ದಾರೆ. ಈಡಾಳಿಗೆ ಆಸರೆಯಾಗಲೆಂದು ಟಿಲ್ಡಾ ಆ ಸಣ್ಣ ಊರಿನಲ್ಲೇ ಉಳಿದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊ ತ್ತುಕೊ ಂಡಿದ್ದಾಳೆ. ಹೀ ಗಿರುವಾಗ ಒಂದು ದಿನ ಬರ್ಲಿ ನ್ ನ ದೊ ಡ್ಡ ವಿಶ್ವವಿದ್ಯಾ ಲಯದಲ್ಲಿ ಪಿಎಚ್ ಡಿ ಮಾಡುವ ಅವಕಾಶವೊ ಂದು ಟಿಲ್ಡಾಳನ್ನು ಅರಸಿ ಬರುತ್ತದೆ. ಅವಳು ತನ್ನ ಸಣ್ಣ ಊರಿನ ಜೀ ವನದಿಂದ ಬಿಡುಗಡೆ ಹೊ ಂದುವ ಕನಸನ್ನು ಕಾಣತೊ ಡಗುತ್ತಾಳೆ. ಇದ್ದಕ್ಕಿ ದ್ದಂತೆ ಯುವಕ ವಿಕ್ಟ ೋರ್ ಊರಿಗೆ ಮರಳುತ್ತಾನೆ. ವಿಕ್ಟ ೋರ್ ನ ತಮ್ಮ ಈವಾನ್ ಟಿಲ್ಡಾಳ ಗೆಳೆಯನಾಗಿದ್ದ. ಟಿಲ್ಡಾಳಂತೆ ವಿಕ್ಟ ೋರ್ ಕೂಡ ಹೊ ರಾಂಗಣ ಈಜುಕೊ ಳದಲ್ಲಿ 22 ಸುತ್ತುಗಳನ್ನು ಈಜುತ್ತಾನೆ. ಜೀ ವನದಲ್ಲಿ ಎಲ್ಲವೂ ಸರಿ ಹೋ ಗುತ್ತಿದೆ ಎಂಬ ಭಾವನೆ ಟಿಲ್ಡಾಳಿಗೆ ಬರುತ್ತಿದ್ದಂತೆಯೇ ಮನೆಯ ಪರಿಸ್ಥಿತಿ ಕೈ ಮೀ ರಿ ಹೋ ಗುತ್ತದೆ. ‘ನನ್ನ ತಂಗಿ ಈಡಾ’ ಕಾದಂಬರಿಯಲ್ಲಿ ಜರ್ಮ ನಿಯ ಸಣ್ಣ ಊರಿನ ಕೌಟುಂಬಿಕ ತಲ್ಲಣಗಳ ಗಾಢ ಚಿತ್ರಣವಿದೆ. ಇಲ್ಲಿ ಜವಾಬ್ದಾರಿ ಮತ್ತು ಸ್ವಾ ತಂತ್ರ್ಯಗಳ ನಡುವೆ ಖುಷಿಯನ್ನು ಕಂಡುಕೊ ಳ್ಳುವ ತುಡಿತವಿದೆ.

More Books from Chanda Pustaka