Chukki Belakina Jaadu
Publisher:
Chanda Pustaka
Language:
Kannada
Pages:
195
Country of Origin:
India
Age Range:
18-100
Average Reading Time
390 mins
Book Description
ಅಪರಿಚಿತವಾದುದನ್ನು ನನ್ನದೇಅನುಭವಎಂಬಂತೆಅನುಭವಕ್ಕೆತಂದುಕೊಡುವುದೇಕಲೆಯ ಶಕ್ತಿ. ಕರ್ಕಿಕೃಷ್ಣಮೂರ್ತಿಯವರ ಚುಕ್ಕಿ ಬೆಳಕಿನ ಜಾಡು ಈ ಶಕ್ತಿಯನ್ನು ಬೆನ್ನತ್ತಿ ಹೊರಟಿದೆ. ಸಮಕಾಲೀನ ಜಗತ್ತಿನ ಸನ್ನಿವೇಶಗಳು ಬದುಕಿನಅಸಂಗತತೆಯನ್ನುಇನ್ನೂದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂಇದುಕಾಣಿಸುತ್ತದೆ. ಆಮಿಷಗಳನ್ನು ಬದುಕುಒಡ್ಡುತ್ತದೋ ನಾವೇ ಸೃಷ್ಟಿಸಿಕೊಳ್ಳುವುದೋ ಎನ್ನುವ ಬಗೆಹರಿಯದದ್ವಂದ್ವ , ಮಹತ್ವಾಕಾಂಕ್ಷೆ, ಕನಸು, ದುರಾಸೆ, ಸ್ವಾರ್ಥ, ಸಣ್ಣತನಗಳ ಸಹಜಅಸಹಜ ನೆಲೆಗಳ ಸಂಘರ್ಷ ಈ ಕೃತಿಯನ್ನು ರೂಪಿಸಿದೆ. ಗುಟ್ಟೇ ಬಿಟ್ಟುಕೊಡದ ಬದುಕನ್ನು, ಅದು ನಿನಗೆ ಬೇಡಎಂದದ್ದನ್ನು ಕಿತ್ತುಕೊಳ್ಳಲು ಹಪಹಪಿಸುವ ಮನುಷ್ಯಾವಸ್ಥೆಯನ್ನುತುಸುಆತಂಕದಿಂದಲೇ ಈ ಕೃತಿಎದುರಾಗುತ್ತದೆ. ಕಾದಂಬರಿಯ ನಾಯಕ ನಿರಂಜನನ ಪಾತ್ರಕ್ಕೆ ಸಾಧಾರಣೀಕರಣದಗುಣ ಮತ್ತು ಸ್ವರೂಪಎರಡೂದಕ್ಕಿದೆ. ಎಲ್ಲ ಹುಲುಮಾನವರ ಒಳಗೂ ಇದ್ದೇಇರುವಕ್ಷುದ್ರ ಸಂಗತಿಗಳನ್ನು ಆತ್ಮವಂಚನೆಯಲ್ಲಿ ನಿಭಾಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಿರಂಜನಇನ್ನೂಒಂದು ಹೆಜ್ಜೆ ಮುಂದೆ ಹೋಗಿ ಅದನ್ನುಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಾ ಹೋಗುತ್ತಾನೆ. ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಯಾವದಾರಿ ಹಿಡಿದರೂತಪ್ಪಿಲ್ಲಎಂದು ಮತ್ತೆ ಮತ್ತೆಯೋಚಿಸುವುದೇ, ತನಗೆತಾನೇ ನಂಬಿಸಿಕೊಳ್ಳಲು ಹೋಗುವುದೇ ಅವನೊಳಗಿನ ಸಾಕ್ಷಿ ಪ್ರಜ್ಞೆಯನ್ನುಧ್ವನಿಸುತ್ತದೆ. ನೈತಿಕಅನೈತಿಕತೆಯ ಪ್ರಶ್ನೆಗಳನ್ನು ನಿರಂಜನ ಸುಪ್ತಪ್ರಜ್ಞೆಯಲ್ಲಿ ಮುಖಾಮುಖಿಯಾಗುತ್ತಾನೆ. ಹೀಗಿದ್ದೂ ಬದುಕಿನೊಳಗೆ ಬಾಳಬಹುದಾದ ಬೆಳಕಿನ ಜಾಡನ್ನು ಹುಡುಕುವಗುಪ್ತಗಾಮಿನಿಯೂ ನಮ್ಮೊಳಗೇ ಇರುವ ಸೂಚನೆಯೂಇಲ್ಲಿದೆ.