ಈ ಜೀವನವನ್ನು ದೈವ ನೀಡಿದ ಅದ್ಭುತ ಉಡುಗೊರೆ. ಈ ಉಡುಗೊರೆಯನ್ನು ಯಶಸ್ವಿವಾಗಿ ಸಂಪತ್ತು ಭರಿತ ಮಾಡಿಕೊಳ್ಳಲು ನಮ್ಮ ಕೈಯಲ್ಲಿ ಇದೆ ಬೀದಿ ಪಾಲು ಮಾಡಿಕೊಳ್ಳಲು ನಮ್ಮ ಕೈಯಲ್ಲಿ ಇದೆ. ಅನಿವಾರ್ಯ ಜೀವನದಲ್ಲಿ ಕಷ್ಟ, ಖುಷಿ ಬರುವುದು ಸಹಜ ಅಲ್ವೇ...!
"ಕಷ್ಟ ಮನುಷ್ಯರಿಗೆ ಬರದೆ ಮರಕ್ಕೆ ಬರುತ್ತಾ"...? ಎಂಬ ನುಡಿಗಟ್ಟು ಎಲ್ಲರಿಗೂ ತಿಳಿದ ವಿಷಯವೇ ಸರಿ. ನನ್ನಿಂದ ಏನನ್ನೂ ಸಾಧಿಸಲು ಆಗದು ಆ ಕೆಲಸ ಈ ಕೆಲಸ ಮಾಡಲು ಬಾರದು ಎಂಬುದು ಭಾವ ಕಿತ್ತು ಹಾಕಬೇಕು ಎಲ್ಲ ಕಾರ್ಯವು ನಮ್ಮಿಂದ ಆಗುವುದೇ. ಒಂದು ಬಾರಿ ವಿಫಲವಾಗಿದರೆ ಕೈ ಚೆಲ್ಲಿ ಕೂರುವುದಲ್ಲ ಸತತ ಪ್ರಯತ್ನ ಫಲ ಕೊಟ್ಟೆ ಕೊಡುತ್ತದೆ.
ತಲೆಯಲ್ಲಿ ನಕಾರಾತ್ಮಕ ಚಿಂತೆಗಳನ್ನು ಬರಲು ಅನು ಮಾಡಬಾರದು "ಆಗುವುದೆಲ್ಲಾ ಒಳ್ಳೆಯದಕ್ಕೆ" ಎಂಬ ಮನಸ್ಥಿತಿ ಇರಬೇಕು. ಹೀಗೆ ಇದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಗೆಲ್ಲಲು ಸಾಧ್ಯ. ಹೀಗೆ ಮರವನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ.
ಒಂದು ಮರವನ್ನು ಯಾರು ಕೂಡಾ ನೆಟ್ಟುವುದಿಲ್ಲ ,ನೀರನ್ನು ಉಣಿಸಿವರಿಲ್ಲ, ಗೊಬ್ಬರದ ಮಾತು ದೂರ ಉಳಿಯಿತು ಆದರೂ ಮರ ಬೆಳೆದು ಹೆಮ್ಮರವಾಗಿ ಬೆಳೆದು ಧನಿದವರಗೆ ನೆರಳಾಗಿ ಹಸಿದವರಿಗೆ ಊಟವಾಗಿ ಇಷ್ಟೆಲ್ಲಾ ನೀಡುತ್ತೆ ಆದರೆ ಇದ್ದಕ್ಕೆ ಒಂದು ಅಂತರೂ ಗೊತ್ತಿಲ್ಲ ನಾನು ಕ್ಷಣ ಮಾತ್ರದಲ್ಲಿ ಯಾರೊದೋ ಕೊಡಲಿಗೆ ಬಲಿಯಾಗುವುದು ಎಂದು ಅಲ್ವಾ...?
ಇನ್ನೂ ಹೇಳುವುದಾದರೆ ನಮ್ಮನ್ನೆಲ್ಲ ಹೊತ್ತೊಯ್ಯುವ ಚಕ್ಕಡಿ ಗಾಡಿ ಕೂಡಾ ಮರದೇ ನಮ್ಮೆಲ್ಲರ ಮನೆಯ ಬಾಗಿಲು ಕೂಡಾ ಮರದೇ ಕೊನೆಗೆ ನಮ್ಮೆಲ್ಲರ ಅಂತ್ಯವಾಗುವುದು ಮರದಿಂದಲೇ ಹೇ...! ಹುಚ್ಚು ಮನುಷ್ಯರಾ... ಇಷ್ಟೆಲ್ಲಾ ನಾನು ಮರವಾಗಿ ಮಾಡಬೇಕಾದರೆ ನೀವು ಮನುಷ್ಯರು ನಿಮ್ಮ ಕೈಯಲ್ಲಿ ಏನೂ ಬೇಕಾದರೂ ಮಾಡಬಹುದು ಸಾಧಿಸಬಹುದು ಎನ್ನುವುದು ನೆನಪಿರಲಿ ಹುಟ್ಟಿನಿಂದಲೇ ಮನುಷ್ಯನಿಗೆ ಸಾಧಿಸುವ ವರ ದೇವರು ನೀಡಿದ್ದಾನೆ ಅದನ್ನು ಚೂರು ಮೆದುಳು ಓಡಿಸಿ ಮಾಡಿ ಎಂದು ಮರ ಬುದ್ಧಿ ಹೇಳಿತ್ತು
Chapters
Chapter 1: ಜೀವನವೇ ಪರಮೈಶ್ವರ್ಯ
FREE
Chapter 2: ಜೀವನವೇ ಪರಮೈಶ್ವರ್ಯ
FREE© All Right Reserverd